top of page

A Bit About Us - ನಾವು ಕರಾಡರು - ನಮ್ಮ ಬಗ್ಗೆ ಕಿರು ಪರಿಚಯ 

IMG_5809.JPG

ಕರಹಾಟಕ ಎನ್ನುವುದು ಕರಾಡದ ಮೂಲ ರೂಪ. ಹತ್ತನೇ ಶತಮಾನಕ್ಕಿಂತ ಹಿಂದೆಯೇ ಇಂದಿನ ಮಹಾರಾಷ್ಟ್ರದ ದಕ್ಷಿಣ ಪಶ್ಚಿಮಭಾಗದಲ್ಲಿ ಇದು ಬೇರೆ ಬೇರೆ ಕಾರಣಗಳಿಗೆ ಪ್ರಸಿದ್ಧಿ ಪಡೆದ ಪ್ರದೇಶವಾಗಿ ಗುರುತಿಸಿಕೊಂಡಿತ್ತು. ಚಾಲುಕ್ಯ ವಿಜಯಾದಿತ್ಯನ ಕ್ರಿಸ್ತಶಕ ೭೦೩ರತಾಮ್ರ ಶಾಸನದಲ್ಲಿ ಕರಹಡ ವಿನಿರ್ಗತ ಭಾರದ್ವಾಜ ಅಗ್ನಿವೇಶ್ಯಾಯಾಮ್ ಎಂಬ ಕರಾಡ ಪದದ ಮೊದಲ ಉಲ್ಲೇಖ ಸಿಗುತ್ತದೆ. ಕನ್ನಡದಕವಿ ಜನ್ನ ೧೨೦೯ರಲ್ಲಿ ಬರೆದ ಯಶೋಧರ ಚರಿತೆಯಲ್ಲಿ ಕರಹಟದೊಳ್‌ ಬೇಂಟೆಯ ಕುಕ್ಕುರಿಯಾದಳ್‌ ಸತ್ತು ಚಂದ್ರಮತಿಯುಂ ಎಂಬ ಉಲ್ಲೇಖವಿದೆ.

ಕ್ರಿಸ್ತ ಶಕ ೧೮೬೦ರಲ್ಲಿ ರಚನೆಗೊಂಡ ಕರಹಾಟಕ ಮಹಾತ್ಮ್ಯಂ ಎಂಬ ಗ್ರಂಥದಲ್ಲಿ ಮಧ್ಯದೇಶೇ ಮಹಾಕ್ಷೇತ್ರಂ ನಾಮ್ನಾ ಶ್ರೀ ಕರಹಾಟಕಮ್‌ಯತ್ರ ಶ್ರೀ ಕೃಷ್ಣ ವೇಣ್ಯಾಯಾಃ ಕಕುದ್ಮತ್ಯಾಶ್ಚ ಸಂಗಮಃ ಎಂಬ ಮಾತಿದೆ. ಹತ್ತನೇ ಶತಮಾನಕ್ಕಿಂತ ಈಚಿನ ಹಲವಾರು ಶಾಸನಗಳು ಮತ್ತುಕೃತಿಗಳಲ್ಲಿ ಕರಹಾಟಕ ಅಥವಾ ಕರಹಟದ ಉಲ್ಲೇಖಗಳು ಸಿಗುತ್ತವೆ. ಇವೆಲ್ಲದರ ಆಧಾರದಲ್ಲಿ, ಹತ್ತನೇ ಶತಮಾನದ ಹೊತ್ತಿಗಾಗಲೇ ಕೃಷ್ಣಾ ವೇಣೀ ಮತ್ತು ಕೊಯನಾ ನದಿಗಳ ಸಂಗಮ ಪ್ರದೇಶವಾದ ಕರಾಡ ಅತ್ಯಂತ ಪ್ರಸಿದ್ಧವಾಗಿತ್ತು ಎಂದು ನಿರ್ಣಯಿಸಬಹುದಾಗಿದೆ.೧೨ನೇ ಶತಮಾನದ ನಾಗವರ್ಮ ತನ್ನ ಭಾಷಾಭೂಷಣದಲ್ಲಿ ಹೇಳುವ ಕರಹಡದೊಳ್‌ ಪುಟ್ಟಿದಾತಮ್‌ ಕರಹಡಿಚಮ್‌ ಎಂಬ ಮಾತು, ದೇಶವಾಚಿಯಾಗಿದ್ದ ಈ ಶಬ್ದ ಈ ಹೊತ್ತಗಾಗಲೇ ಜನಾಂಗವಾಚಿಯಾಗಿತ್ತು ಎನ್ನುವುದನ್ನು ಸೂಚಿಸುತ್ತದೆ.

ಎಲ್ಲಾ ಕರಾಡ ಬ್ರಾಹ್ಮಣರೂ ಆಶ್ವಲಾಯನ ಸೂತ್ರ ದವರೆಂದೂ ಕರಹಾಟಕದಿಂದ ಮೊದಲು ಕೊಂಕಣಕ್ಕೆ ವಲಸೆ ಹೋದರೆಂದೂ ಅಲ್ಲಿಂದಬೇರೆಬೇರೆ ಭಾಗಗಳಿಗೆ ಹೋಗಿರಬೇಕೆಂದೂ ವಾಸುದೇವ ಅಠಲೆಯವರು ಅಭಿಪ್ರಾಯಪಡುತ್ತಾರೆ. ಕೊಂಕಣಕ್ಕೆ ಹೋದ ಇವರನ್ನು ಮೊದಲುದೇಶವಾಚೀ ಶಬ್ದದಿಂದ ಗುರುತಿಸಲಾಯಿತು. ಬರಬರುತ್ತ ಅದೇ ಶಾಶ್ವತವಾಗಿ ಉಳಿದುಕೊಂಡಿತು.

ಕರಹಾಟಕ ಎಂಬ ಪದ ಮುಂದೆ ಕರಹಾಟ, ಕರ್ಹಾಟ, ಕರ್ಹಾಡ ಆಗಿ ಈಗ ಕರಾಡ ಎಂಬ ರೂಪ ಪಡೆದಿದೆ.

ಕರಾಡದಿಂದ ಕೊಂಕಣ, ಧಾರವಾಡಗಳ ಮೂಲಕ ಕರಾಡ ಬ್ರಾಹ್ಮಣರ ಒಂದು ಗುಂಪು ಹಳೆಯ ದಕ್ಷಿಣ ಕನ್ನಡದ ಪಶ್ಚಿಮ ದಕ್ಷಿಣಪ್ರದೇಶಗಳಿಗೆ ವಲಸೆ ಬಂತು. ಈ ವಿವರವನ್ನು ಖಂಡೇರಿ ಅನಂತ ಶಾಸ್ತ್ರಿಗಳ ಅಗಲ್ಪಾಡಿ ಮಹಾತ್ಮ್ಯ ಎಂಬ ಕೃತಿ ಉಲ್ಲೇಖಿಸುತ್ತದೆ.ಕರಾಡ ಬ್ರಾಹ್ಮಣರು ಈ ಭಾಗದಲ್ಲಿ ಮುಖ್ಯವಾಗಿ ಮರಾಠಿಯ ಮೂರು ಉಪಭಾಷೆಗಳನ್ನು ಬಳಸುತ್ತಾರೆ. ಈ ಭಾಷಾ ಭಿನ್ನತೆಯಆಧಾರದಲ್ಲಿ ಇವರು ಬೇರೆ ಬೇರೆ ಕಾಲಘಟ್ಟಗಳಲ್ಲಿ ವಲಸೆ ಬಂದಿರಬೇಕೆಂದು ಊಹಿಸಲು ಸಾಧ್ಯವಿದೆ.

ಕರಾಡರು ಯಾವಾಗ ವಲಸೆ ಬಂದರು ಎನ್ನುವುದಕ್ಕೆ ಸರಿಯಾದ ದಾಖಲೆಗಳಾಗಲೀ ಆಧಾರಗಳಾಗಲಿ ಉಪಲಬ್ಧವಿಲ್ಲ. ಆದರೆ, ಇವರಭಾಷೆಯ ಮೇಲೆ ಉಂಟಾದ ದ್ರಾವಿಡ ಭಾಷಾ ಪ್ರಭಾವದ ಆಧಾರದಲ್ಲಿ ಸುಮಾರು ೧೬ನೇ ಶತಮಾನದ ಹೊತ್ತಿಗೆ ಮೊದಲ ಪಂಗಡ ವಲಸೆಬಂದು ಆವಳ, ಅಗಲ್ಪಾಡಿ, ಪಡ್ರೆ ಪರಿಸರಗಳಲ್ಲಿ ನೆಲೆನಿಂತಿರಬೇಕು ಎಂದು ಊಹಿಸುವುದಕ್ಕೆ ಸಾಧ್ಯವಿದೆ. ಅನಂತರ ಬಂದು ಬೇಕಲಪರಿಸರದಲ್ಲಿ ನೆಲೆನಿಂತವರ ಭಾಷೆಯ ಮೇಲೆ ದ್ರಾವಿಡ ಭಾಷಾ ಪ್ರಭಾವ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತದೆ. ದಕ್ಷಿಣ ಕನ್ನಡದಮಧ್ಯೋತ್ತರ ಭಾಗಗಳ ಭಾಷೆಯೂ ಭಿನ್ನವಾಗಿದೆ. ಜತೆಗೆ, ಮಹಾರಾಷ್ಟ್ರದಿಂದ ವಲಸೆಬಂದು ಕರಾಡರ ವಾಸ್ತವ್ಯದ ಪರಿಸರದಲ್ಲಿ ನೆಲೆನಿಂತಪರಿಶಿಷ್ಟ ಪಂಗಡದ ಭಾಷೆಯೂ ದೊಡ್ಡ ಪ್ರಮಾಣದಲ್ಲಿ ದ್ರಾವಿಡ ಭಾಷಾ ಪ್ರಭಾವಕ್ಕೆ ಒಳಗಾಗಿದೆ. ಈ ಪರಿಶಿಷ್ಟ ಪಂಗಡದವರಿಗೂಇಕ್ಕೇರಿ ನಾಯಕರ ಕಾಲದಲ್ಲಿ ವಲಸೆ ಬಂದ ಆರ್ಯ ಮರಾಠರಿಗೂ ಕರಾಡ ಬ್ರಾಹ್ಮಣರೇ ಪುರೋಹಿತರು. ಈ ಮೂರು ಪಂಗಡದವರೂದುರ್ಗೆ ಅಥವಾ ಶಕ್ತಿ ಯನ್ನು ಆರಾಧಿಸುತ್ತಾರೆ. ಎಲ್ಲರೂ ಶೃಂಗೇರಿ ಮಠವನ್ನು ಗುರುಪೀಠವಾಗಿ ಒಪ್ಪಿಕೊಂಡವರು. ಇಂತಹ ಸಾಮ್ಯತೆಗಳಆಧಾರವನ್ನು ಇಟ್ಟುಕೊಂಡು, ಕರಾಡರು ಇಕ್ಕೇರಿ ನಾಯಕರ ಕಾಲದಲ್ಲಿ ವಲಸೆ ಬಂದಿರಬಹುದು ಎಂದು ಊಹಿಸಲು ಅವಕಾಶಗಳಿವೆ.ಕರಾಡರಿಗೆ ಕೊಂಗೂರು, ಆವಳ, ಅಗಲ್ಪಾಡಿ ಮತ್ತು ತೈರೆ ಎಂಬ ಒಟ್ಟು ನಾಲ್ಕು ಮಠಗಳಿವೆ. ಒಂದು ದೇವಾಲಯವನ್ನು ಮಠ ಎಂದುಗುರುತಿಸಬೇಕಾದರೆ ಒಂದೋ ಅಲ್ಲಿ ಯತಿಗಳಿರಬೇಕು, ಅಥವಾ ಪಾಠಶಾಲೆ ಇರಬೇಕು, ಅದಲ್ಲದಿದ್ದರೆ ನಿತ್ಯ ಅನ್ನದಾನ ನಡೆಯಬೇಕು.ಪಾಠಶಾಲೆ ಮತ್ತು ಅನ್ನದಾನ ಇರುವ ಕಾರಣಕ್ಕೆ ಈ ದೇವಾಲಯಗಳನ್ನು ಮಠಗಳೆಂದು ಗುರುತಿಸಲಾಗಿದೆ. ಮಠಗಳ ಹೊರತಾಗಿಬೆರಳೆಣಿಕೆಯ ಶಾಲೆಗಳೂ ದೇವಾಲಯಗಳೂ ಕರಾಡರ ಆಡಳಿತದಲ್ಲಿವೆ. ಕರಾಡರು ತಾವು ವಲಸೆಬಂದು ನೆಲೆಸಿದ ತುಳುನಾಡಿನಸಂಸ್ಕೃತಿಯನ್ನೂ ಕೃಷಿಯನ್ನೂ ಒಪ್ಪಿಕೊಂಡು ತಮ್ಮ ಅನನ್ಯತೆಗಳನ್ನು ನಿಧಾನವಾಗಿ ಕಳೆದುಕೊಳ್ಳುತ್ತ ಬಂದಿದ್ದಾರೆ. ಭಾಷೆ ಸ್ಥಳೀಯದ್ರಾವಿಡ ಭಾಷೆಗಳಿಂದ, ಅದರಲ್ಲೂ ಕನ್ನಡದಿಂದ ಧಾರಾಳ ಪದಗಳನ್ನು ಸ್ವೀಕರಿಸಿಕೊಂಡಿದೆ. ಸ್ಥಳೀಯ ಆರಾಧನೆಯೂ ಆಹಾರ ಕ್ರಮವೂಕರಾಡರನ್ನು ಪ್ರಭಾವಿಸಿದ್ದು ಕಂಡುಬರುತ್ತದೆ. ಸ್ಥಳೀಯ ಶಿಕ್ಷಣ ಕ್ರಮಕ್ಕೂ, ಔದ್ಯೋಗಿಕ, ರಾಜಕೀಯ ವಲಯಗಳಿಗೂ ಕರಾಡರು ಸಾಕಷ್ಟುಪ್ರಮಾಣದಲ್ಲಿ ತೆರೆದುಕೊಂಡಿದ್ದಾರೆ. ತಮ್ಮ ಮೂಲ ಮಹಾರಾಷ್ಟ್ರದ ಸಂಪಕದಿಂದ ಇವರು ಸಂಪೂರ್ಣ ಕಳಚಿಕೊಂಡಿದ್ದಾರೆ.ಸಂಸ್ಕೃತಿ, ಅಡುಗೆ, ಆಚಾರ ಮುಂತಾಗಿ ಒಂದಷ್ಟು ವಿಷಯಗಳಲ್ಲಿ ತಮ್ಮದೇ ಆದ ವೈಶಿಷ್ಟ್ಯಗಳನ್ನು ಉಳಿಸಿಕೊಂಡಿರುವ ಕರಾಡರುಮೂಲತಃ ಕಾಲನಿಗಳಾಗಿ ವಾಸ್ತವ್ಯ ಹೂಡಿದ್ದು, ನಿಧಾನತಃ ಅಲ್ಲಿಂದ ಚೆದುರಿದಂತೆ ಕಂಡುಬರುತ್ತದೆ. ಆವಳ ಮತ್ತು ಪಡ್ರೆಗಳಲ್ಲಿ ಇನ್ನೂಅಂತಹ ಗುಂಪು ವಸತಿಗಳು ಉಳಿದುಕೊಂಡಿವೆ.

ಕರಾಡರ ಸಂಸ್ಕೃತಿ ಮತ್ತು ಭಾಷೆಯ ಕುರಿತು ಬೆರಳೆಣಿಕೆಯ ಅಧ್ಯಯನಗಳು ನಡೆದಿವೆ. ಸಣ್ಣ ಪ್ರಮಾಣದ ಜನಪದ ಸಾಹಿತ್ಯವೂ, ಲಿಖಿತಸಾಹಿತ್ಯವೂ ಈ ಭಾಷೆಯಲ್ಲಿ ರಚನೆಗೊಂಡಿದೆ. ಒಂದಷ್ಟು ಅನುವಾದಗಳೂ ನಡೆದಿವೆ.ಪ್ರಸ್ತುತ, ಕರಾಡ ಬ್ರಾಹ್ಮಣರು ಎಂಬ ಪದವನ್ನು ಹಳೆಯ ದಕ್ಷಿಣ ಕನ್ನಡದಲ್ಲಿ ನೆಲೆನಿಂತ, ಅದ್ವೈತ ಪರಂಪರೆಯನ್ನು ಒಪ್ಪಿಕೊಂಡ, ಮರಾಠಿಯ ಜಾನಾಂಗಿಕ ಉಪಭಾಷೆಗಳನ್ನು ಮನೆಮಾತಾಗಿ ಹೊಂದಿದ ಅಲ್ಪ ಸಂಖ್ಯಾತ ಬ್ರಾಹ್ಮಣ ಸಮೂಹ ಎಂಬ ಅರ್ಥದಲ್ಲಿತೆಗೆದುಕೊಳ್ಳಲಾಗಿದೆ. ಮಹಾರಾಷ್ಟ್ರದಲ್ಲೇ ಉಳಿದುಕೊಂಡ ಅಥವಾ ಬೇರೆ ಪ್ರದೇಶಗಳಿಗೆ ವಲಸೆಹೋದ ಕರಾಡರ ಸಂಖ್ಯೆ ಬಹಳಷ್ಟಿದ್ದರೂಅವರು ಇಲ್ಲಿ ಉದ್ದೇಶಿಸಲಾದ ಅಥವ್ಯಾಪ್ತಿಯಲ್ಲಿ ಒಳಗೊಳ್ಳುವುದಿಲ್ಲ.

Dr. Radhakrishna N. Bellur

Karahāṭa, a word of geographic reference is the original form of the word Karāḍa. Karahāṭaka was one of theprominent provinces in existence before 10 th C.E AD which had its stretch across the south western parts ofMaharashtra. The copper plate inscription of 703 AD belonging to the Chalukya king Vijayaditya refers to theemergence of this group. It says, ‘karhāḍa vinirgata bhāradwaja agnivéshānām’.Janna, one of the well known Kannada poets of the early 13 th C.E AD refers to the place of Karahāṭaka in his epic‘Yashodhara Charité’. A similar allusion is portrayed in ‘Kharāṭaka Mahātméyam’ belonging to 1860 AD. It refers tothe existence of a place called Kharhāṭaka in a region near the conflux of Krishna-Veni and Koyana rivers. NagavarmaThe Second, a Jain poet and a semanticist of 12 th C.E AD in his ‘Bhāshābhōshaṅa’ says, ‘kharāṭadoļ puṭṭidātankharāḍicham’. This paved a way for the word ‘Kharāṭaka’ to shift its position from a geographically specific word tothat of a community reference word called ‘Karāḍa’.According to Vasudeva Atale, Karada brahmins being essentially Rigvedi brahmins followed Ashwalāyana Sūtra andmigrated first to Konkan from Karahāṭaka, later expanding to other parts of the country. Those who settled in Konkanwere identified with the name of their geographic.A group of Karada brahmins migrated from Karada, through Dharavada and Konkan finally reaching to the southeastern parts of old Dakshina Kannada. This migration is described in ‘Agalpāḍy Mahātmya’ by Khanderi AnantaShastry.Three different dialects of Marathi are spoken by Karada Brahmins in this region. It indicates that the migration isheld at deferent times.There is unavailability of authentic documentation or evidences regarding the period of migration of Karada brahminsfrom Maharashtra. However, based on the influence of dravidian languages on Karada, it can be predicted that the firstgroup of Karada brahmins might have migrated during 16th CE AD, thereby establishing settlements around Avala,Agalpady and Padre.The influence of dravidian languages is less observed in the language of that Karada group which settled in Bekala.The Karada language in the middle regions of Dakshina Kannada seems to be quite different. Moreover, the languageof a scheduled community which migrated from Maharashtra and settled under the circumference of Karada brahminsettlements, has also been heavily influenced by the dravidian languages.Karada brahmins are the chief priests for this scheduled caste and also to the Arya Marathas who migrated fromMaharashtra during the rule of Ikkeri Nayakas. These three groups worship goddess Durga and Shakti thereby accepting Shringeri Matha as their gurumatha.Thus, by gathering all these evidences, it can be predicted that  Karada brahmins might have migrated from their landof origin during the period of Ikkeri Nayakas.Karadas have four Mathas namely Konguru, Avala, Agalpady and Taire. If a temple has to be identified as a Matha,there should be the presence of hermits, a paathashaala, or an act of regular food donation. The presence ofpaathashaala and food donation has thus made the above temples to get identified as Mathas.Apart from Mathas, there are certain temples and schools that comes under the administration of Karada brahmins.Through the process of time, Karadas have accepted the agriculture and culture of Tulunadu, thereby losing most oftheir uniqueness.Karada language has welcomed majority of words from dravidian languages especially from Kannada. The influenceof regional worships and food culture over Karada brahmins can be widely observed. Karada brahmins have been largely open to the regional education system, employment and political spheres. Theyhave been completely detached from their root land in Maharashtra. Karada brahmin groups which once  settled incolonies got slowly scattered into different places by preserving their culture, cuisines, practices and theirspecifications. However, Karada colonies still exist in Avala and Padre. So far, minimal studies have been organizedon Karada language and culture. Few written literature and folk literature are available in this language along withsome translations.At present, the phrase " Karada brahmins" is used to identify that minority  of brahmins who once migrated fromMaharashtra and settled in old Dakshina Kannada thereby accepting Advaita tradition and  speaking a variantlanguage of Marathi. Eventhough, Karada groups which either remained in Maharashtra or  migrated to other regions are large in number, they do not fitinto the  circumference of the above descriptions.Dr. Radhakrishna N. BellurTranslated byRachana Phadke

bottom of page